ಮೋಹನ ಚಂದ್ರಗುತ್ತಿ, ಚಂದ್ರಗುತ್ತಿ ಕನ್ನಡದ ವಿಮರ್ಶಕ ಮತ್ತು ಚಿಂತಕರಾಗಿದ್ದಾರೆ. ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನವು ಇವರ ಕಾರ್ಯಕ್ಷೇತ್ರವಾಗಿದೆ. == ಶಿಕ್ಷಣ == ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಚಂದ್ರಗುತ್ತಿಯಲ್ಲಿ ಮುಗಿಸಿ, ಸೊರಬದಲ್ಲಿ ಪಿಯುಸಿ, ಲಾಲ್ ಬಹದ್ದೂರ್ ಕಾಲೇಜು, ಸಾಗರದಲ್ಲಿ ಪದವಿ, ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯ. ಶಂಕರಘಟ್ಟದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಗಳಿಸಿದ್ದಾರೆ. === ವೃತ್ತಿಜೀವನ === ಈಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 09 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದು, ಪ್ರಸ್ತುತ 06 ವಿದ್ಯಾರ್ಥಿಗಳು ಸಂಶೋಧನೆ ಮಾಡುತ್ತಿದ್ದಾರೆ, ಇದುವರೆಗೂ ಇವರ 60 ಪ್ರಬಂಧಗಳು ಪ್ರಕಟವಾಗಿವೆ, 30ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತರಾಷ್ಟ್ಟೀಯ ವಿಚಾರಸಂಕಿರಣದಲ್ಲಿ ಮಂಡಿಸಿದ್ದಾರೆ, ರಾಜ್ಯದ ಹಲವು ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿದೆ, ರಾಷ್ಟ್ರೀಯ, ರಾಜ್ಯ ಮಟ್ಟದ ಹಲವು ಕಮ್ಮಟಗಳನ್ನು ಸಂಘಟಿಸಿದ್ದಾರೆ. ನಾಡಿನಾದ್ಯಂತ ಸಾವಿರಾರು ವಿಚಾರ ಪ್ರಚೋದಕ ಉಪನ್ಯಾಸಗಳನ್ನು ನೀಡಿದ್ದಾರೆ. == ಕೃತಿಗಳು == ದೀವರ ಮಕ್ಕಳು ದೇವರಾಜ ಅರಸು ಮುಕ್ರಿಗಳು ಸಮಪಾಲು ಸುರಗಿದಂಡೆ ಕುಲಕಥನ ಹಸೆ ಚಿತ್ತಾರ ಜೇಡಜಾಲ ಡೊಳ್ಳಿನ ಪದಗಳು ಬೆಳಕು ಬೆಳದ ಕಥನ ಚಂದ್ರಗುತ್ತಿ ಜಾತ್ರೆ ನೆಲದ ತವಕ ಪಂಚಪಾತ್ರೆಯ ಹುಡುಗಿ ಮತ್ತು ಇತರ ಕಥೆಗಳು ನಾರಾಯಣ ಗುರುಗಳು == ಹೊರಗಿನ ಸಂಪರ್ಕಗಳು == ://..///-1005957. ://.//. 2015-05-15 ವೇಬ್ಯಾಕ್ ಮೆಷಿನ್ ನಲ್ಲಿ. ://..//--------695848. ://.///-//45160049.